LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

‌ದೇಶಕ್ಕೆ ಜೈನ ಸಮಾಜದ ಕೊಡುಗೆ ಅಪಾರ

ಬೆಳಗಾವಿ: ‌
ದೇಶಕ್ಕೆ ಜೈನ ಸಮಾಜದ ಕೊಡುಗೆ ಬಹಳಷ್ಟಿದೆ. ಇತಿಹಾಸದ ಪುಟದಲ್ಲಿ ಅಚ್ಚಳಿಯದ ಸೇವೆ ಸಲ್ಲಿಸಿದ್ದಾರೆ. ಕೃಷಿ, ವ್ಯಾಪಾರ, ಶೈಕ್ಷಣಿಕ ಮತ್ತು ಕನ್ನಡ ಭಾಷೆಗೆ ಸಮಾಜದ ಕೊಡುಗೆ ಅಪಾರ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬಣ್ಣಿಸಿದರು.
ನಗರದ ಕಮಲ ಬಸದಿ ಮಂದಿರದ ಆವರಣದಲ್ಲಿ ಶನಿವಾರ ಆಯೋಜಿಸಲಾದ  ಮದ್ದೆದೇವಾಧಿದೇವ 1008 ಭಗವಾನ ನೇಮಿನಾಥ ದಿಗಂಬರ ಐತಿಹಾಸಿಕ ಪುರಾತನ ಜಿನಮಂದಿರ ಶ್ರೀ ಧರ್ಮಚಕ್ರ  ಆರಾಧನಾ ಮಹಾಮಹೋತ್ಸವದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
 ಇಲ್ಲಿರುವ ಕಮಲ ಬಸದಿಯು ಐತಿಹಾಸಿಕ ಸ್ಥಳವಾಗಿದ್ದು, ಜೈನ್‌ ಸಮಾಜದ ಮುಖಂಡ ಸುನೀಲ್‌ ಹನಮಣ್ಣವರ್‌ ಮನವಿ ಮೇರೆಗೆ ಕಮಲ ಬಸ್ತಿ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಅನುದಾನ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಕಮಲ ಬಸದಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಪ್ರವಾಸಿ ಸ್ಥಳವನ್ನಾಗಿ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಸ್‌ ಜಾರಕಿಹೊಳಿ ಭರವಸೆ ನೀಡಿದರು. 
ಜೈನ್‌ ಸಮುದಾಯಕ್ಕೆ ಸಂಬಂಧಿಸಿದ ರಾಜ್ಯದ ನಾಲ್ಕು ಮಠಗಳಿಗೆ ನಮ್ಮ ಇಲಾಖೆಯಿಂದ ಅನುದಾನ ನೀಡಿದ್ದೇನೆ. ಹಾಸನ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಮಠಗಳಿಗೆ ಅಷ್ಟೇ ಅಲ್ಲ, ಜೈನ್‌ ಸಮುದಾಯದ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುವ ಊರುಗಳಿಗೆ ಉತ್ತಮ ರಸ್ತೆ ಮಾಡಿ ಕೊಟ್ಟಿದ್ದೇವೆ. ಹಾಸನ, ಶಿವಮೊಗ್ಗ ಜಿಲ್ಲೆಯ ಸಮುದಾಯದ ಸ್ವಾಮೀಜಿಗಳು ಮನವಿ ಸಲ್ಲಿಸದಿದ್ದರೂ ಕರೆ ಮಾಡಿ ಹೇಳಿದಕ್ಕೆ ಅನುದಾನ ನೀಡಿದ್ದೇವೆ ಎಂದು ತಿಳಿಸಿದರು. 
ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದಲ್ಲಿಯೂ 2023ರ ಅವಧಿಯಲ್ಲಿ ಸಮುದಾಯಕ್ಕೆ ಬೇಕಾದ ಕೆಲಸಗಳನ್ನು ಮಾಡಿದ್ದೇವೆ. ಅಲ್ಪಸಂಖ್ಯಾರ ಬಗ್ಗೆ ನಮ್ಮ ಸರ್ಕಾರ ವಿಶೇಷ ಕಾಳಜಿ ವಹಿಸಿದೆ. ಮುಂದೆಯೂ ಅಲ್ಪಸಂಖ್ಯಾರ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಜೈನ್‌ ಸಮುದಾಯಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಬರುವ ದಿನಗಳಲ್ಲಿ ಹೆಚ್ಚಿನ  ಅಭಿವೃದ್ಧಿ ಮಾಡಿ ಹೆಚ್ಚು ಅನುದಾನ ನೀಡಲಾಗುವುದು ಎಂದು ಹೇಳಿದರು.
ಡಾ. ವಿನೋದ ದೊಡ್ಡಣ್ಣವರ ಮಾತನಾಡಿ‌, ಕಮಲ ಬಸದಿ ಸೇರಿದಂತೆ ರಾಜ್ಯದ ಜೈನ ಸಮುದಾಯದ ಜೈನ ಅಭಿವೃದ್ಧಿಗೆ  ಸಚಿವ ಸತೀಶ್ ಜಾರಕಿಹೊಳಿ ಶ್ರಮಿಸಿದ್ದಾರೆ. ಮೈಸೂರು ಭಾಗದ ಜೈನ ಸಮುದಾಯಕ್ಕೆ 10 ಕೋಟಿ ರೂ. ನೀಡಿದ್ದಾರೆ. 40 ವರ್ಷದ ಅವಧಿಯಲ್ಲಿ ಜೈನ ಸಮುದಾಯದ ಅಭಿವೃದ್ಧಿ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಗುಣಗಾನ ಮಾಡಿದರು.
ಜಿನಮಂದಿರ ಶ್ರೀ ಧರ್ಮಚಕ್ರ  ಆರಾಧನಾ ಮಹಾಮಹೋತ್ಸವದಲ್ಲಿ  ಪ.ಪೂ. ಆ. ಶ್ರೀ 108 ಧರ್ಮಸೇನ ಮನಿಮಹಾರಾಜರು  ಆಶೀರ್ವಚನ ನುಡಿದರು. ನಂತರ ಈ ವೇಳೆ ವಿಶ್ವ ಶಾಂತಿಗಾಗಿ ಜೈನ್ ಧರ್ಮದ ಐತಿಹಾಸಿಕ ಕಾರ್ಯಕ್ರಮದಲ್ಲಿ ಧರ್ಮಚಕ್ರ ಆರಾಧನೆ, ವಿಶೇಷ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು.ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ,  ಶಾಸಕರಾದ ರಾಜು ಸೇಠ್‌, ಬಾಬಾಸಾಹೇಬ್‌ ಪಾಟೀಲ, ಗಣೇಶ ಹುಕ್ಕೇರಿ, ವಿಪ ಸದಸ್ಯ ಚನ್ನರಾಜ ಹೊಟ್ಟಿಹೊಳಿ,  ಮಾಜಿ ಶಾಸಕ ವೀರಕುಮಾರ ಪಾಟೀಲ್, ಜಿ‌. ರಾವ್‌ಸಾಹೇಬ ಪಾಟೀಲ್ ,  ಬುಡಾ ಅಧ್ಯಕ್ಷ ಲಕ್ಷಣರಾವ್‌ ಚಿಂಗಳೆ,  ವಾಯುವ್ಯ ಕರ್ನಾಟಕ ರಸ್ತೆ  ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾದ ಸುನೀಲ್ ಹನಮಣ್ಣನವರ, ಹಿರಾಚಂದ ಕಲಮನಿ , ಅಭಿನಂದನ ಪಾಟೀಲ, ಉತ್ತಮ ಪಾಟೀಲ್,  ರವಿರಾಜ ಪಾಟೀಲ್ ,  ಸನ್ಮತಿ ಕಸ್ತೂರಿ ಸೇರಿದಂತೆ ಜೈನ ಸಮುದಾಯದ ಮುಖಂಡರು ಹಾಗೂ ಶ್ರಾವಕ- ಶ್ರಾವಕಿಯರು ಇದ್ದರು.
ಕಮಲ ಬಸದಿ ವೀಕ್ಷಿಸಿದ ಸಚಿವರು: ಇದಕ್ಕೂ ಮೊದಲು ಸಚಿವ ಸತೀಶ್‌ ಜಾರಕಿಹೊಳಿ ಅವರು  ಕಮಲ ಬಸದಿಗೆ ಭೇಟಿಕೊಟ್ಟು 1008 ಭಗವಾನ ನೇಮಿನಾಥ ಭಗವಾನರಿಗೆ ಪೂಜೆ ಸಲ್ಲಿಸಿದರು. ನಂತರ ಐತಿಹಾಸಿಕ ಸ್ಥಳವಾದ ಕಮಲ ಬಸದಿಯನ್ನು ವೀಕ್ಷಿಸಿದರು. ನಂತರ  ಅಲ್ಲೇ ವೇದಿಕೆ ಮೇಲಿದ್ದ ಜೈನ ಮುನಿಗಳ ಆಶೀರ್ವಾದ ಪಡೆದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್