LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಅಪಾಯವಿದೆ ಎಚ್ಚರಿಕೆ ಚಿತ್ರದ  ಹಿತವಾದ ಚುರುಕು ನೋಟವೇ ಲವ್ ಸಾಂಗ್ 

    ಈ ಹಿಂದೆ ಮೋಶನ್ ಪೋಸ್ಟರ್ ಮತ್ತು ಬ್ಯಾಚುಲರ್ ಸಾಂಗ್ ಬಿಡುಗಡೆ ಮಾಡಿದ 'ಅಪಾಯವಿದೆ ಎಚ್ಚರಿಕೆ' ಚಿತ್ರತಂಡ ನಂತರ ಚಿತ್ರದ ಟೀಸರ್ ಬಿಡುಗಡೆಗೊಳಿಸಿ ಅದರ ವಿಶೇಷತೆ ಯಿಂದ ನಿರೀಕ್ಷೆ ಹುಟ್ಟಿಸಿತ್ತು. ಪ್ರಾರಂಭದಿಂದಲೂ ಹೊಸತನದ ಕಂಟೆಂಟ್ ಜೊತೆ ಕಾಣಿಸಿ ಕೊಳ್ಳುತ್ತಿದ್ದ ಅಭಿಜಿತ್ ತೀರ್ಥಹಳ್ಳಿ ನಿರ್ದೇಶನ 'ಅಪಾಯವಿದೆ ಎಚ್ಚರಿಕೆ'  ಚಿತ್ರದಲ್ಲಿ ಇದೀಗ ಹೊಸ ಹಾಡೊಂದು ಬಿಡುಗಡೆಯಾಗಿದೆ.


     ಚುರುಕು ನೋಟವೇ ಸುಳಿವು ನೀಡಿದೆ ಎನ್ನುವ ಸುಂದರ ಸಾಲುಗಳೊಂದಿಗೆ ಶುರುವಾಗೋ ಈ ಹಾಡಿನ ಸಾಹಿತ್ಯವನ್ನು ಸ್ವತಃ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಯವರೇ ಬರೆದಿರುವುದು ವಿಶೇಷ. ತುಂಬಾ ಅಪರೂಪದ ಪದಬಳಕೆ ಮೂಲಕ ಸಾಹಿತ್ಯದಲ್ಲೂ ತಮ್ಮ ಸೃಜನಶೀಲತೆ ತೋರಿರುವ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿಗೆ ಸಂಗೀತದಲ್ಲಿ ಸಾಥ್ ನೀಡಿದ್ದಾರೆ ಸುನಾದ್ ಗೌತಮ್.


     ಅನಂತು ವರ್ಸಸ್ ನುಸ್ರತ್ ಚಿತ್ರದ ಈಗ ತಾನೇ ಜಾರಿಯಾಗಿದೆ ಮತ್ತು ಜೊತೆಜೊತೆಯಲಿ ಧಾರಾವಾಹಿಯ ನೂರು ಜನ್ಮ ಕೂಡಿ ಬಾಳುವ ನಂತಹ ಹಿಟ್ ಹಾಡುಗಳನ್ನು ಕೊಟ್ಟ ಸುನಾದ್ ಗೌತಮ್ ಈಗ ಹೊಸ ಮೆಲೋಡಿ ನೀಡುವುದರ ಜೊತೆಗೆ ಕೇಳುಗನಿಗೆ ಹೊಸ ಇಂಪನ್ನು ಉಣಬಡಿಸಲು ಸಜ್ಜಾಗಿದ್ದಾರೆ. ಸರಿಗಮಪ ಖ್ಯಾತಿಯ ರಜತ್ ಹೆಗ್ಡೆ ಚುರುಕು ನೋಟವೇ ಹಾಡಿಗೆ ಧ್ವನಿಯಾಗಿದ್ದು ತನ್ನ ಕಂಠದಿಂದಲೇ ಮೋಡಿ ಮಾಡಿದ್ದಾರೆ. ಒಟ್ಟಾರೆ ಮನಸಿಗೆ ಮುದ ನೀಡಿ ಕಾಡುವಂತಹ ಹೊಸ ಗೀತೆ ಯೊಂದು ಕನ್ನಡ ಚಿತ್ರರಂಗದಲ್ಲಿ ತನ್ನ  ಮೆಲೋಡಿ ಟಚ್ ನಿಂದ ಸದ್ದು ಮಾಡುತ್ತಿದೆ.


     ಸಸ್ಪೆನ್ಸ್, ಹಾರರ್ ಥ್ರಿಲ್ಲರ್ ಜಾನರ್ ಹೊಂದಿರುವ 'ಅಪಾಯವಿದೆ ಎಚ್ಚರಿಕೆ' ಚಿತ್ರ ಇದೆ ಫೆಬ್ರವರಿ ಯಲ್ಲಿ ತೆರೆ ಕಾಣಲು ಸಜ್ಜಾಗಿದೆ. ಚಿತ್ರಕ್ಕೆ ವಿ. ಜಿ ಮಂಜುನಾಥ್ ಮತ್ತು ಪೂರ್ಣಿಮಾ ಎಂ ಗೌಡ ಬಂಡವಾಳ ಹೂಡಿದ್ದಾರೆ. ಚಿತ್ರದ ಚುರುಕು ನೋಟವೇ ಸಾಂಗಲ್ಲಿ ಅಣ್ಣಯ್ಯ ಖ್ಯಾತಿಯ ನಾಯಕ ವಿಕಾಶ್ ಉತ್ತಯ್ಯ ಮತ್ತು ನಾಯಕಿ ರಾಧಾ ಭಗವತಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ನಡುವಿನ ಕಚೆಗುಳಿ ಇಡುವಂತಹ ಲವ್ ದೃಶ್ಯಗಳನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ. ಈ ಹಾಡಿನ ಲಿರಿಕಲ್ ವಿಡಿಯೋ ಈಗಾಗಲೇ ಆನಂದ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್