LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
International News

ದೇಶಕ್ಕೆ ಆಮದಾಗುವ ಸೆಮಿಕಂಡಕ್ಟರ್​ಗಳ ಮೇಲೆ ಗಣನೀಯ ಸುಂಕ: ಟ್ರಂಪ್‌ ಘೋಷಣೆ

ವಾಷಿಂಗ್ಟನ್​: ಕಂಪ್ಯೂಟರ್​ ಚಿಪ್​ಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸುವುದಾಗಿ ಬೆದರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇದೀಗ ತಮ್ಮ ಸುಂಕ ನೀತಿಯ ಕುರಿತು ಪುನರುಚ್ಚರಿಸಿದ್ದು, ತಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುವ ಸೆಮಿಕಂಡಕ್ಟರ್​ಗಳ ಮೇಲೆ ಸಾಕಷ್ಟು ಗಣನೀಯ ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.


ಟೆಕ್​ ಉದ್ಯಮಗಳ ಕಾರ್ಯದರ್ಶಿಗಳೊಂದಿಗೆ ಗುರುವಾರ ರಾತ್ರಿ ಔತಣಕೂಟದಲ್ಲಿ ಮಾತನಾಡಿರುವ ಡೊನಾಲ್ಡ್​ ಟ್ರಂಪ್​, ನಾವು ಶೀಘ್ರ ಗಣನೀಯ ಸುಂಕವನ್ನು ವಿಧಿಸಲಿದ್ದು, ಇದು ದುಬಾರಿ ಆಗಿರುವುದಿಲ್ಲ, ಸುಸ್ಥಿರವಾಗಿರಲಿದೆ ಎಂದಿದ್ದಾರೆ. ಈ ಹೊಸ ಸುಂಕದ ಜಾರಿ ಬಗ್ಗೆ ನಿಗದಿತ ದಿನ ಅಥವಾ ವಿವರಗಳ ಬಗ್ಗೆ ಅವರು ಮಾತನಾಡಿಲ್ಲ.


ಆಗಸ್ಟ್ ಆರಂಭದಲ್ಲಿ ಟ್ರಂಪ್, ಅಮೆರಿಕದಲ್ಲಿ ಹೂಡಿಕೆ ಮಾಡದ ಸಂಸ್ಥೆಗಳ ಸೆಮಿಕಂಡಕ್ಟರ್‌ಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸುವ ಬಗ್ಗೆ ತಿಳಿಸಿದ್ದರು. ಈ ಸುಂಕ ಹೆಚ್ಚಳದ ಮಾತು ಏಷ್ಯಾದ ಚಿಪ್‌ಮೇಕರ್ ಷೇರುಗಳಲ್ಲಿ ಏರಿಳಿತವನ್ನು ಉಂಟು ಮಾಡಿತ್ತು.


ನಾವು ಚಿಪ್ಸ್ ಮತ್ತು ಸೆಮಿಕಂಡಕ್ಟರ್‌ಗಳ ಮೇಲೆ ಶೇ.100ರಷ್ಟು ಸುಂಕವನ್ನು ವಿಧಿಸುತ್ತೇವೆ. ಒಂದು ವೇಳೆ, ಈ ಚಿಪ್​ಗಳನ್ನು ಅಮೆರಿಕದಲ್ಲಿ ನಿರ್ಮಿಸುತ್ತಿದ್ದರೆ, ಇದರ ಮೇಲೆ ಯಾವುದೇ ಶುಲ್ಕವಿಲ್ಲ. ಅಮೆರಿಕದಲ್ಲಿ ಕಂಪ್ಯೂಟರ್ ಚಿಪ್‌ಗಳನ್ನು ತಯಾರಿಸುವ ಕಂಪನಿಗಳು ಆಮದು ತೆರಿಗೆಯಿಂದ ಮುಕ್ತವಾಗುತ್ತವೆ ಎಂದು ಟ್ರಂಪ್​ ತಿಳಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST