LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
International News

ಭಾರತ, ಚೀನಾ, ಜಪಾನ್​ಗೆ ಜೆನಾಫೋಬಿಯಾ ಎಂದ ಅಮೆರಿಕ ಅಧ್ಯಕ್ಷ ಜೋ ಬೈಡನ್

ವಾಷಿಂಗ್ಟನ್, ಮೇ 2: ವಲಸಿಗರ ಬಗ್ಗೆ ಅನಗತ್ಯ ಭಯ ಹೊಂದಿರುವ ದೇಶಗಳು ಆರ್ಥಿಕವಾಗಿ ಬೆಳೆಯಲು ಕಷ್ಟಪಡಬೇಕಾಗುತ್ತದೆ. ವಲಸಿಗರನ್ನು ಕೈಬೀಸಿ ಕರೆಯುತ್ತಿರುವ ಅಮೆರಿಕದ ಆರ್ಥಿಕತೆ ಉತ್ತಮವಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ (Joe Biden) ಹೇಳಿದ್ದಾರೆ. ಚೀನಾದಿಂದ ಹಿಡಿದು ಜಪಾನ್, ಭಾರತದವರೆಗೆ ಹಲವು ದೇಶಗಳು ಜೆನಾಫೋಬಿಯಾಗೆ  ಒಳಗಾಗಿವೆ ಎಂದು ಅಮೆರಿಕ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ಜೆನಾಫೋಬಿಯಾ ಎಂದರೆ ವಲಸಿಗರ ಬಗ್ಗೆ ಇರುವ ಅಸಹನೆ ಭಾವನೆ. ಭಾರತದಲ್ಲಿ ರೋಹಿಂಗ್ಯ ಮುಸ್ಲಿಮ್ ವಲಸಿಗರ ಸಮಸ್ಯೆ, ಬಾಂಗ್ಲಾದೇಶೀ ವಲಸಿಗರ ಬಗ್ಗೆ ಆತಂಕ ಇದೆ. ಈ ವಿಚಾರವನ್ನು ಅಮೆರಿಕ ಅಧ್ಯಕ್ಷರು ಪ್ರಸ್ತಾಪಿಸಿ ಪರೋಕ್ಷವಾಗಿ ಕುಟುಕಿದರಾ? ಅಥವಾ ಸಿಎಎ ವಿಚಾರವಾಗಿ ಅವರು ಕುಟುಕಿದರಾ? ಎಂಬ ಅನುಮಾನ ಮೂಡುತ್ತಿದೆ.

ಜೋ ಬೈಡನ್ ಅವರು 2024ರ ಚುನಾವಣೆಯಲ್ಲಿ ತಮ್ಮ ಸ್ಪರ್ಧೆಗೆ ಚಂದಾ ಪಡೆಯಲು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ವಲಸಿಗರಿಗೆ ಮಣೆ ಹಾಕುವ ಅಜೆಂಡಾ ಇಟ್ಟುಕೊಂಡೇ ಕಳೆದ ಬಾರಿ ಅವರು ಅಧ್ಯಕ್ಷೀಯ ಚುನಾವಣೆ ಜಯಿಸಿದ್ದರು. ಅಮೆರಿಕದಲ್ಲಿ ವಲಸಿಗರ ಪ್ರಾಬಲ್ಯ ಹೆಚ್ಚುತ್ತಿರುವ ಹೊತ್ತಿನಲ್ಲೇ ಅವರ ಪರವಾಗಿ ಬೈಡನ್ ನಿಂತಿದ್ದಾರೆ.

‘ಚೀನಾ ಯಾಕೆ ಆರ್ಥಿಕವಾಗಿ ಹೀನವಾಗುತ್ತಿದೆ? ಜಪಾನ್ ಯಾಕೆ ಸಮಸ್ಯೆ ಎದುರಿಸುತ್ತಿದೆ? ರಷ್ಯಾ, ಭಾರತ ಇವೆಲ್ಲಾ ಯಾಕೆ ಸಮಸ್ಯೆ ಎದುರಿಸುತ್ತಿವೆ? ಯಾಕೆಂದರೆ ಈ ದೇಶಗಳೆಲ್ಲಾ ಜೆನಾಫೋಬಿಕ್ ಆಗಿವೆ. ವಲಸಿಗರನ್ನು ಅವು ದೂರ ಇಟ್ಟಿವೆ. ಆದರೆ, ವಲಸಿಗರಿಂದಲೇ ನಾವು ಬಲಶಾಲಿಗಳಾಗಿದ್ದೇವೆ,’ ಎಂದು ಜೋ ಬೈಡನ್ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್ ಪ್ರಕಾರ 2023ಕ್ಕೆ ಹೋಲಿಸಿದರೆ 2024ರಲ್ಲಿ ಬಹುತೇಕ ದೇಶಗಳ ಆರ್ಥಿಕ ಬೆಳವಣಿಗೆ ಕಡಿಮೆ ಆಗಬಹುದು. ಜಪಾನ್ ಬೆಳವಣಿಗೆ ಕೇವಲ ಶೇ. 0.9ರಷ್ಟಾಗಬಹುದು. ಭಾರತದ ಜಿಡಿಪಿ ದರ ಶೇ. 6.8ರಷ್ಟು ಇರಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ.

ಇದೇ ವೇಳೆ ಅಮೆರಿಕದ ಆರ್ಥಿಕ ಬೆಳವಣಿಗೆ ಶೇ. 2.5ರಿಂದ ಶೇ. 2.7ರಷ್ಟು ಹೆಚ್ಚಬಹುದು ಎಂದು ಅದು ನಿರೀಕ್ಷಿಸಿದೆ. ಈ ಅಚ್ಚರಿಯ ವೃದ್ಧಿಗೆ ವಲಸಿಗರು ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಲಸಿಗರ ಆಗಮನದಿಂದಾಗಿ ಅಮೆರಿಕದ ಕಾರ್ಮಿಕ ಶಕ್ತಿ ಹೆಚ್ಚಿದ್ದು ಅದು ಆರ್ಥಿಕತೆಗೆ ಪಾಕ್ಷಿಕವಾಗಿ ಪುಷ್ಟಿ ಕೊಡಬಹುದು ಎಂದು ಹೇಳಲಾಗುತ್ತಿದೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ವಲಸಿಗರ ವಿಚಾರ ಹೆಚ್ಚು ಪ್ರಧಾನವಾಗಿರಲಿದೆ. ಡೆಮಾಕ್ರಾಟ್ ಪಕ್ಷದ ಜೋ ಬೈಡನ್ ಅವರು ವಲಸಿಗರ ಪರವಾಗಿ ನಿಂತಿದ್ದಾರೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ವಲಸಿಗರಿಗೆ ಕಡಿವಾಣ ಹಾಕುವ ಅಜೆಂಡಾ ಇಟ್ಟು ಪ್ರಚಾರ ಮಾಡುತ್ತಿದ್ದಾರೆ. ನವೆಂಬರ್​ನಲ್ಲಿ ಮತದಾರರು ಡೆಮಾಕ್ರಾಟ್ ಅಥವಾ ರಿಪಬ್ಲಿಕನ್ ಪಕ್ಷಗಳ ಪೈಕಿ ಯಾರ ಕೈ ಹಿಡಿಯುತ್ತಾರೆ ನೋಡಬೇಕು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್