LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಯಾದಗಿರಿ PSI ಸಾವು ಪ್ರಕರಣವನ್ನು CIDಗೆ ನೀಡಲಾಗಿದೆ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ''ಯಾದಗಿರಿ PSI ಸಾವು ಪ್ರಕರಣವನ್ನು CIDಗೆ ನೀಡಲಾಗಿದೆ. ಪಿಎಸ್​ಐ ಪರಶುರಾಮ್ ಪತ್ನಿಗೆ ಸರ್ಕಾರಿ ಕೆಲಸ ಕೊಡಬೇಕು ಅಂತ ನಾವು ತೀರ್ಮಾನ ಮಾಡಿದ್ದೇವೆ'' ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.


ಸದಾಶಿವನಗರ ನಿವಾಸದ ಬಳಿ ಯಾದಗಿರಿ ಪಿಎಸ್​ಐ ಸಾವು ಪ್ರಕರಣ ಸಂಬಂಧ ಮಾತನಾಡಿದ ಅವರು, ''ಸಿಐಡಿ ತನಿಖೆಗೆ ಕೊಟ್ಟಿದ್ದೇವೆ. ಮೃತ ಪೊಲೀಸ್ ಹೆಂಡತಿಗೆ ಸರ್ಕಾರದಿಂದ ಉದ್ಯೋಗ ಕೊಡ್ತೀವಿ. ಪೋಸ್ಟ್ ಮಾರ್ಟಮ್ ರಿಪೋರ್ಟ್ ನಿರೀಕ್ಷೆ ಮಾಡ್ತಿದ್ದೇವೆ. ಅದು ಬಂದ ಮೇಲೆ ಯಾಕೆ ಸಾವಾಗಿದೆ ಅಂತ ಗೊತ್ತಾಗುತ್ತದೆ. ನಾಡಿದ್ದು ಅವರ ಮನೆಗೆ ಹೋಗಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಅವರಿಗೆ ಪರಿಹಾರ ಮತ್ತು ಉದ್ಯೋಗ ನೀಡುವ ಕೆಲಸ ಮಾಡುತ್ತೇವೆ. ಉದ್ಯೋಗ ಕೊಡಲು ಸಿಎಂ ಮತ್ತು ನಾನು ಚರ್ಚೆ ಮಾಡಿದ್ದೇವೆ'' ಎಂದರು.


ಶಾಸಕ ಮತ್ತು ಶಾಸಕನ ಪುತ್ರನ ಮೇಲೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ''ಈಗಾಗಲೇ CID ತನಿಖೆಗೆ ಕೊಡಲಾಗಿದೆ. ತನಿಖೆ ವರದಿ ಬರಲಿ. ತನಿಖೆಯಲ್ಲಿ ಶಾಸಕರು ಮತ್ತು ಅವರ ಪುತ್ರನ ಪಾತ್ರವಿದ್ದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ತೀವಿ'' ಎಂದು ಸ್ಪಷ್ಟಪಡಿಸಿದರು.


ಸುರ್ಜೇವಾಲ, ವೇಣುಗೋಪಾಲ್ ಸಭೆ ವಿಚಾರವಾಗಿ ಮಾತನಾಡಿ, ''ಸಿಎಂ ಬಗ್ಗೆ ಅನಾವಶ್ಯಕ ಆಪಾದನೆಗಳನ್ನು ಮಾಡಿ ವಿರೋಧ ಪಕ್ಷದವರು ಪಾದಯಾತ್ರೆ ಮಾಡಿ ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಅದಕ್ಕೆ ಸರಿಯಾದ ಉತ್ತರ ಕೊಡಬೇಕು ಅಂತ ಹೇಳಿದ್ದಾರೆ. ಪ್ರತಿಯೊಬ್ಬ ಸಚಿವರು ಅದರ ಬಗ್ಗೆ ಮಾತಾಡಬೇಕು ಅಂತ ಹೇಳಿದ್ದಾರೆ. ನಾವು ಅದನ್ನು ಈಗಾಗಲೇ ಮಾಡ್ತಿದ್ದೇವೆ. ನಾವು ಕೂಡಾ ಅವರು ಎಲ್ಲೆಲ್ಲಿ ಪಾದಯಾತ್ರೆ ಮಾಡ್ತಿದ್ದಾರೆ ಅಲ್ಲಿಗೆ ಹಿಂದಿನ ದಿನ ನಾವು ಹೋಗಿ ಅನೇಕ ಪ್ರಶ್ನೆಗಳನ್ನು ಹಾಕ್ತಿದ್ದೇವೆ. ನಿಮ್ಮ ಕಾಲದಲ್ಲಿ ಏನಾಗಿತ್ತು ಅಂತ ಪ್ರಶ್ನೆ ಕೇಳ್ತಿದ್ದೇವೆ'' ಎಂದರು.


''ಮುಡಾ ಬಗ್ಗೆ ಏನು ಸತ್ಯಾಂಶ ಅನ್ನೋದರ ಬಗ್ಗೆ ನಾವೂ ಕೂಡಾ ತಿಳಿಯುತ್ತಿದ್ದೇವೆ. ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟರೆ ಕಾನೂ‌ನು ಹೋರಾಟ ಮಾಡ್ತೀವಿ. ಕ್ಯಾಬಿನೆಟ್ ನಿರ್ಣಯವನ್ನು ರಾಜ್ಯಪಾಲರು ಒಪ್ಪುತ್ತಾರೆ ಅಂತ ನಮಗೆ ರಾಜ್ಯಪಾಲರ ಮೇಲೆ ವಿಶ್ವಾಸ ಇದೆ. ನೋಟಿಸ್ ವಾಪಸ್ ಪಡೆಯಬೇಕು ಮತ್ತು ಪ್ರಾಸಿಕ್ಯೂಷನ್​ಗೆ ಅಬ್ರಾಹಂ ಕೇಳಿರೋ ಮನವಿ ತಿರಸ್ಕರಿಸುವಂತೆ ಸಂಪುಟ ಸಭೆ ತೀರ್ಮಾನಿಸಿದೆ. ಇದರಲ್ಲಿ ಸತ್ಯಾಂಶ ಇಲ್ಲ ಅಂತ ಕ್ಯಾಬಿನೆಟ್ ನಿರ್ಣಯ ಮಾಡಿ ಕಳಿಸಿದಾಗ, ಅದನ್ನು ಮೀರಿ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ಕೊಡ್ತಾರೆ ಅಂತ ನಾನು ಅಂದುಕೊಳ್ಳೊಲ್ಲ'' ಎಂದು ತಿಳಿಸಿದರು.


''ರಾಜ್ಯಪಾಲರಿಗೆ ಅಧಿಕಾರ ಇರಬಹುದು. ಆದರೆ, ಕ್ಯಾಬಿನೆಟ್ ಸಲಹೆಯನ್ನು ಅವರು ಅಷ್ಟು ಸುಲಭವಾಗಿ ರಿಜೆಕ್ಟ್ ಮಾಡುವುದಿಲ್ಲ ಅಂತ ಅಂದುಕೊಳ್ತೀನಿ. ಇದನ್ನು ಮೀರಿ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ರೆ ನಾವು ಕೂಡಾ ಕಾನೂನು ಹೋರಾಟವನ್ನು ಮಾಡ್ತೀವಿ'' ಎಂದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್