ಯರಗಟ್ಟಿ: ಪಟ್ಟಣದ ಎಸ್.ಜಿ.ಕೆ ಡಿಫೆನ್ಸ್ ಅಕಾಡೆಮಿ ಆಯೋಜಿಸಿದ್ದ ೧೬೦೦ಮೀ ಒಟದ ಆರ್ಮಿ ಡೆಮೊ ರ್ಯಾಲಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಸವದತ್ತಿ ತಹಶೀಲ್ದಾರ ಎಮ್ ಎನ್. ಹೆಗ್ಗನ್ನವರ ಮಾತನಾಡಿದ ಅವರು ಓಟ ಎನ್ನುವುದು ಕೇವಲ ಶಾರೀರಿಕ ಚಟುವಟಿಕೆಯಲ್ಲ ಅದು ನಮ್ಮ ಮನಸ್ಸಿನ ದೃಢತೆ, ಶಿಸ್ತು ಮತ್ತು ನಿರಂತರ ಪ್ರಯತ್ನದ ಸಂಕೇತವಾಗಿದೆ. ಮೈದಾನಕ್ಕೆ ಇಳಿದಿರುವ ಪ್ರತಿಯೊಬ್ಬ ಕ್ರೀಡಾಪಟುವಿನಲ್ಲೂ ಗೆಲ್ಲಲೇಬೇಕೆಂಬ ಹಠ ಮತ್ತು ಉತ್ಸಾಹ ಎದ್ದು ಕಾಣುತ್ತಿದೆ. ಕ್ರೀಡೆಯಲ್ಲಿ ಗೆಲುವಿಗಿಂತಲೂ ಭಾಗವಹಿಸುವಿಕೆ ಮತ್ತು ಕ್ರೀಡಾ ಸ್ಫೂರ್ತಿ ಅತ್ಯಂತ ಮುಖ್ಯವಾದುದು.
ಈ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿದ ಸಂಘಟಕರಿಗೆ ನನ್ನ ಅಭಿನಂದನೆಗಳು. ಓಟದಲ್ಲಿ ಭಾಗವಹಿಸುತ್ತಿರುವ ಎಲ್ಲಾ ಕ್ರೀಡಾಪಟುಗಳಿಗೂ ನನ್ನ ಹೃತ್ಪೂರ್ವಕ ಶುಭ ಹಾರೈಕೆಗಳು. ನಿಮ್ಮ ಗುರಿಯತ್ತ ಮುನ್ನಡೆಯಿರಿ, ಯಶಸ್ಸು ನಿಮ್ಮದಾಗಲಿ ಎಂದು ಹಾರೈಸಿದರು.
ಕಾಂಗ್ರೆಸ್ ಮುಖಂಡ ಪ್ರಕಾಶ ವಾಲಿ ಮಾತನಾಡಿ ಎಸ್.ಜಿ.ಕೆ ಡಿಫೆನ್ಸ್ ಅಕಾಡೆಮಿ ಆರ್ಮಿಯಲ್ಲಿ ಯಾವರೀತಿ ಆಯೋಜಿಸಿರುತ್ತಾರೊ ಅದೇರಿ ಆಯೋಜಿಸಿದ್ದು ಕ್ರೀಡಾಪಟುಗಳು ಶ್ರದ್ಧೆಯಿಂದ ಭಾಗವಹಿಸಿದ್ದು ನೋಡಿದರೆ ಸಂತೋಷವಾಗಿ ಕ್ರೀಡಾಪಟುಗಳು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಈ ವೇಳೆ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ವಿಠ್ಠಲ ಹಾರುಗೊಪ್ಪ, ಮಾಜಿ ಸೈನಿಕ ಕುಮಾರ ಹಿರೇಮಠ, ಎಸ್.ಜಿ.ಕೆ ಡಿಫೆನ್ಸ್ ಸಂಸ್ಥಾಪಕ ಸುರೇಶ ಭಜಂತ್ರಿ, ಸತೀಶ ತಡಸಲೂರ, ಜೆ.ರತ್ನಾಕರ ಶೆಟ್ಟಿ, ಪ್ರಕಾಶ ಸೂಣದೋಳಿ, ರಫೀಕ ಡಿ ಕೆ, ಅಬಿದಬೇಗ ಜಮಾದಾರ, ಫಾರುಕ್ ಅತ್ತಾರ, ರಾಜು ಬಿರ್ಜಿ, ಅಲ್ತಾಫ್ ಮುಲ್ಲಾ, ಉಮೇಶ ಮಾಗುಂಡನ್ನವರ, ಕೋಟ್ರೇಶ ಎಚ್. ಮಹಾಂತೇಶ ಮಾದರ, ಪ್ರಕಾಶ ಬಾಗಿಲದ, ರಾಜು ಕೊಂಜಾರ ಸೇರಿದಂತೆ ಅನೇಕರು ಇದ್ದರು.